ಕನ್ನಡ ರಾಜ್ಯೋತ್ಸವದ ಕಿರು ಪರಿಚಯ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇತಿಹಾಸ : ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕ್ರಿಯಾಪದ

ಈ ಪೂರ್ವದಲ್ಲಿ ಧಾತುವೆಂದರೇನು? ಅವು ಎಷ್ಟು ಪ್ರಕಾರ? ಎಂಬುದನ್ನು ಅರಿತಿರಿ.  ಈಗ ಧಾತುಗಳು ಕ್ರಿಯಾಪದ ಗಳಾಗುವ ರೀತಿಯನ್ನು ತಿಳಿಯೋಣ.  ಈ ಕೆಳಗೆ ಕೆಲವು ಕ್ರಿಯಾಪದ ಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ನೋಡೋಣ. ಕ್ರಿಯಾಪದ ಏಕವಚನ ಧಾತು ಕಾಲಸೂಚಕ ಪ್ರತ್ಯಯ ಆಖ್ಯಾತ ಪ್ರತ್ಯಯ (ಬಹುವಚನ) (೧) ಮಾಡುತ್ತಾನೆ – ಮಾಡು + ಉತ್ತ + ಆನೆ-(ಮಾಡುತ್ತಾರೆ) (೨) ಮಾಡುತ್ತಾಳೆ – ಮಾಡು + ಉತ್ತ + ಆಳೆ-(ಮಾಡುತ್ತಾರೆ) (೩) ಮಾಡುತ್ತದೆ – ಮಾಡು + ಉತ್ತ + ಅದೆ-(ಮಾಡುತ್ತವೆ) (೪) […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕ್ರಿಯಾಪ್ರಕೃತಿ ಮತ್ತು ಸಕರ್ಮಕ, ಅಕರ್ಮಕ ಧಾತುಗಳು

ಹಿಂದಿನ ಅಧ್ಯಾಯದಲ್ಲಿ, ನಾಮಪ್ರಕೃತಿ-ನಾಮವಿಭಕ್ತಿಪ್ರತ್ಯಯ-ನಾಮಪದ ಎಂದರೇನು? ಪ್ರಕೃತಿಗಳ ವಿಧಗಳು, ಪ್ರತ್ಯಯಗಳ ವಿಧಗಳು ಇವುಗಳ ಬಗೆಗೆ ತಿಳಿದಿದ್ದೀರಿ.ಈಗ ನಾಮಪದ ಗಳ ಹಾಗೆಯೇ ಇನ್ನೊಂದು ರೀತಿಯ ಪದಗಳ ವಿಚಾರವನ್ನು ತಿಳಿಯೋಣ. ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆತಿಳಿದಿದೆ. (i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ. (ii) ತಂದೆಯು ಕೆಲಸವನ್ನು ಮಾಡಿದನು. (iii) ಅಣ್ಣ ಊಟವನ್ನು ಮಾಡುವನು. (iv) ದೇವರು ಒಳ್ಳೆಯದನ್ನು ಮಾಡಲಿ. (vi) ಅವನು ನಾಳೆಯದಿನ ಮಾಡಾನು (ಮಾಡಿಯಾನು). (vii) ಅವನು ಊಟವನ್ನು ಮಾಡನು. ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ, ಮಾಡಿದನು, ಮಾಡುವನು, ಮಾಡಲಿ, ಮಾಡಾನು (ಮಾಡಿಯಾನು), ಮಾಡನು -ಇವೆಲ್ಲಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ. ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ-ಪದಗಳನ್ನುಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ. ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ. ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.   ಮಾಡುತ್ತಾನೆ ಮಾಡು ಮಾಡಿದನು ಮಾಡುವನು ಮಾಡಲಿ ಮಾಡಾನು ಮಾಡನು ಮಾಡು ಎಂಬ ಈ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಅದು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವಕ್ರಿಯಾಪದವಾಗುವುದು. ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು. ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು.  ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು. ಇಂಥ ಧಾತುಗಳು ಎರಡು ವಿಧ.   ಧಾತು ಮೂಲ ಧಾತು ಪ್ರತ್ಯಯಾಂತ ಧಾತು   (೧) ಮೂಲಧಾತುಗಳು- ಉದಾಹರಣೆಗೆ:- ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ಹೊಳೆ, ಬದುಕು, ಇಕ್ಕು,ಮುಗಿ, ತೂಗು, ಹಿಗ್ಗು, ನಡುಗು, ಮಿಂಚು, ಮೆಟ್ಟು, ಹಂಚು, ಅಂಜು, ಈಜು, ಉಜ್ಜು, ದಾಟು, ಹುಟ್ಟು, ಒಕ್ಕು, ತುಂಬು, ಮುಚ್ಚು, ಹಿಡಿ, ಕೊಡು, ಹರಡು, ಇಡು, ಪಡೆ, ಕುಣಿ,ಕಾಣು, ಸುತ್ತು, ಒತ್ತು, ಎತ್ತು, ಬಿತ್ತು, ತೆರು, ಒದೆ, ತಿದ್ದು, ಹೊಡೆ, ಬಡಿ, ಬರೆ, ನೆನೆ, ಎನ್ನು, ಒಪ್ಪು, ತಪ್ಪು, ನಂಬು, ಉಬ್ಬು, ಕಾ, ಬೇ, ಮೀ, ಮೇ, ಚಿಮ್ಮು, ಹೊಯ್,ಬಯ್, ಸುಯ್, ಕೊಯ್, ತೆಯ್, ಸುರಿ, ಅರಿ, ಹೀರು, ಸೇರು, ಸೋಲು, ಹೊಲಿ, ಬಲಿ, ಹೇಸು, ಅರಸು, ಹುಡುಕು, ಬಳಸು, ಗುಡಿಸು, ಚೆಲ್ಲು, ತೊಳೆ, ಬೆಳಗು, ಬಡಿಸು,ಇಳಿ, ಏರು, ಹೊಗಳು, ತೆಗಳು, ಬಾಳು, ಬೀಳು, ತಾಳು, ಎಳೆ, ಕಳಿ, ಸೆಳೆ, ತಿಳಿ, ಸುಳಿ, ಕೊರೆ-ಇತ್ಯಾದಿ. ಮೇಲೆ ಹೇಳಿದವುಗಳಲ್ಲದೆ ಇನ್ನೂ ಅನೇಕ ಧಾತುಗಳಿವೆ. ಈ ಎಲ್ಲ ಧಾತುಗಳಿಂದ ಆದ ವಿವಿಧ ಪ್ರತ್ಯಯಗಳನ್ನು ಹೊಂದಿ ವರ್ತಮಾನ, ಭೂತ, ಭವಿಷ್ಯತ್‌ಕಾಲಗಳಲ್ಲೂವಿಧ್ಯರ್ಥ, ಸಂಭಾವನಾರ್ಥ, ನಿಷೇಧಾರ್ಥಗಳಲ್ಲೂ ನಾವು ಅನೇಕ ಕ್ರಿಯಾಪದಗಳನ್ನು ಪ್ರತಿನಿತ್ಯ ಭಾಷೆಯಲ್ಲಿ ಬಳಸುತ್ತೇವೆ. (೨) ಸಾಧಿತ ಧಾತು (ಪ್ರತ್ಯಯಾಂತ ಧಾತು)- ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ. ಉದಾಹರಣೆಗೆ:- ಅವನು ಆ ಗ್ರಂಥವನ್ನು ಕನ್ನಡಿಸಿದನು. ಕನ್ನಡ ಎಂಬುದು ನಾಮಪ್ರಕೃತಿಯಾಗಿದೆ. ಇದು ಧಾತುವಲ್ಲ. ಇದರ ಮೇಲೆ ಇಸು ಪ್ರತ್ಯಯ ಹಚ್ಚಿ ಕನ್ನಡಿಸುಎಂದು ಆಗುವುದಿಲ್ಲವೆ? ಹೀಗೆ ಕನ್ನಡಿಸು ಎಂದಾದ ಮೇಲೆ ಇದು ಧಾತುವೆನಿಸುತ್ತದೆ. ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ-ಕನ್ನಡಿಸುತ್ತಾನೆ, ಕನ್ನಡಿಸಿದನು, ಕನ್ನಡಿಸುವನು, ಕನ್ನಡಿಸಲಿ, ಕನ್ನಡಿಸಾನು, ಕನ್ನಡಿಸನು-ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ. ಇಂಥ ಧಾತುಗಳನ್ನೇ ನಾವುಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ. ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೂ, ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೂ ಇಸು ಎಂಬಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳೆನಿಸುತ್ತವೆ. ಇವಕ್ಕೆ ಸಾಧಿತ ಧಾತುಗಳೆಂದೂ ಹೆಸರು. ಉದಾಹರಣೆಗೆ:-   ನಾಮ ಪ್ರಕೃತಿ + ಇಸು = ಧಾತು – ಕ್ರಿಯಾಪದ ಕನ್ನಡ + ಇಸು = ಕನ್ನಡಿಸು – ಕನ್ನಡಿಸಿದನು ಓಲಗ + ಇಸು = ಓಲಗಿಸು – ಓಲಗಿಸುತ್ತಾನೆ ಅಬ್ಬರ + […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ನಾಮಪದ

ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ. ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ. ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ. ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು. ರೈತರು ಕಷ್ಟದಿಂದ ಬೆಳೆಯನ್ನು ಬೆಳೆಯುವರು. ಈ ವಾಕ್ಯಗಳಲ್ಲಿ:- ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನು–ಇವೆಲ್ಲ ನಾಮಪದಗಳು. ಕಟ್ಟಿದನು, ಬೆಳೆಯುವರು–ಇವು ಕ್ರಿಯಾಪದಗಳು. ಚೆನ್ನಾಗಿ – ಎಂಬುದು ಅವ್ಯಯ. ಹೀಗೆ ನಾವು ಆಡುವ ಮಾತುಗಳನ್ನು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ತತ್ಸಮ ತದ್ಭವ ರೂಪಗಳು

ಸಂಸ್ಕೃತದಿಂದ ಅಸಂಖ್ಯಾತ ಪದಗಳು ಕನ್ನಡಕ್ಕೆ ತದ್ಭವ ರೂಪವಾಗಿ ಬಂದಿರುವುದರಿಂದ, ಅವುಗಳು ಕನ್ನಡಕ್ಕೆ ಬಂದ ಕ್ರಮವನ್ನು ವಿಸ್ತಾರವಾಗಿಯೇ ತಿಳಿಯಬೇಕಾದುದು ಅವಶ್ಯವಾದುದು. ಆ ಬಗೆಗೆ ಈಗ ವಿಚಾರ ಮಾಡೋಣ. ಸಂಸ್ಕೃತ ಮತ್ತು ಪ್ರಾಕೃತಗಳಿಂದ ಆ ಭಾಷೆಯ ಶಬ್ದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುವಾಗ ಹಲಕೆಲವು ವ್ಯತ್ಯಾಸ ಮಾಡಿ ಕನ್ನಡಿಗರು ಕನ್ನಡಕ್ಕೆ ಸೇರಿಸಿಕೊಂಡಿದ್ದಾರೆಂದು ಈ ಹಿಂದೆಯೇ ವಿವರಿಸಲಾಗಿದೆ. ತತ್ಸಮಗಳು-ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು. ತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನವಾದುದು-ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ (ಎಂದು ಅರ್ಥ) […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ

ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಿನಾಯಕ ಕೃಷ್ಣ ಗೋಕಾಕ

ಡಾ||ವಿನಾಯಕ ಕೃಷ್ಣ ಗೋಕಾಕ ಅವರು ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಎತ್ತರದ ಲೇಖಕ. ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ [೧] ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಜನನ ವಿನಾಯಕ ಕೃಷ್ಣರಾವ್ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ತ್ರಿಪದಿ ಕವಿ ಸರ್ವಜ್ಞ

 ‘ಸರ್ವಜ್ಞ’ ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ; ಅದೊಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು. ಎಂದರೆ  ಸರ್ವಜ್ಞನವೆಂದು ನಾವು ಒಪ್ಪಿಕೊಂಡಿರುವ ಈ ತ್ರಿಪದಿಗಳಲ್ಲಿ ಎಷ್ಟನ್ನೋ ವಾಸ್ತವವಾಗಿ ರಚಿಸಿದ ಕವಿಯೊಬ್ಬ ಈ ಪದ್ಧತಿಯ ಮೂಲದಲ್ಲಿ ಇದ್ದಿರಲೆ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಖಂಡಿತ ಇದನ್ನು ಬರೆದ ವ್ಯಕ್ತಿಯೊಬ್ಬ ಇದ್ದಿರಬೇಕು. ಅವನ ಹೆಸರೇನೋ ತಿಳಿಯದು. ‘ಸರ್ವಜ್ಞ’ ಎಂಬುದೇ ಈ ತ್ರಿಪದಿಗಳಲ್ಲಿ ಎಷ್ಟನ್ನೊ ಬರೆದ ಕವಿಯ ಹೆಸರಿದ್ದಿರಬೇಕು- ‘ಪ್ರಭು’ ‘ಪ್ರಭುದೇವ’ ಎಂಬ ಹೆಸರಿನಂತೆ, ಸರ್ವಜ್ಞ ಎಂಬುದೂ ಒಬ್ಬ ವ್ಯಕ್ತಿಯ ಹೆಸರಾಗಿದ್ದಿರಬೇಕು ಎನ್ನುತ್ತಾರೆ ಕೆಲವರು. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಸಂತ ಶಿಶುನಾಳ ಶರೀಫರು

ಸಂತ ಶಿಶುನಾಳ ಶರೀಫರ ಅವತಾರ ಸ್ಥಾನ ಶಿಶುನಾಳ. ಪುಣ್ಯದ ಪುಂಜವೇ ಮೈತಳೆದಂತಿದ್ದ ಶರೀಫರಿಗೆ ಹಾಡು, ಭಜನೆ, ಪುರಾಣ, ತತ್ವಪದ ರಚನೆಯಲ್ಲಿ ವಿಶೇಷ ಆಸಕ್ತಿ. ಶರೀಫರ ಅಭಿರುಚಿಗೆ ತಕ್ಕಂತೆ ತಂದೆ ಇಮಾಮ್ ಸಾಹೇಬರು ಮಾರ್ಗದರ್ಶನ ನೀಡುತ್ತಿದ್ದರು. ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. 1819 ಮಾರ್ಚ 7 ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ದೇಶ್ಯ ಅಚ್ಚಗನ್ನಡ ಶಬ್ದಗಳು ಮತ್ತು ಅನ್ಯದೇಶ್ಯ ಶಬ್ದಗಳು

ಅಚ್ಚಗನ್ನಡ ಶಬ್ದಗಳನ್ನು ‘ದೇಶ್ಯ’ ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು ‘ಅನ್ಯದೇಶ್ಯ’ ಶಬ್ದಗಳೆನ್ನುತ್ತೇವೆ. ಅಲ್ಲದೆ ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂಬ ಹೆಸರಿಟ್ಟಿದ್ದೇವೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ.ಈ ಎಲ್ಲಾ ದೇಶ್ಯ, ಅನ್ಯದೇಶ್ಯ, ತತ್ಸಮ, ತದ್ಭವಗಳ ವಿಚಾರವಾಗಿ ಸ್ಥೂಲವಾಗಿ ತಿಳಿದುಕೊಳ್ಳೋಣ. ದೇಶ್ಯ ಅಚ್ಚಗನ್ನಡ ಶಬ್ದಗಳು ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ದೇಶ್ಯ-ಅನ್ಯದೇಶ್ಯ-ತತ್ಸಮ-ತದ್ಭವ ಪ್ರಕರಣ – ಪೀಠಿಕೆ

ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ. ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ. ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ. ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ. ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು. ಅವೂ ಇರಬೇಕು; ಪರಭಾಷೆ ಶಬ್ದಗಳೂ ಇರಬೇಕು. ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು. ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:- […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಒಂದು ಸಾಹಸ ಕಥೆ

2008ರಲ್ಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತ್ತಾದರೂ ತಮಿಳುನಾಡಿನ ಗಾಂಧಿ ಎಂಬುವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಲಿಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರವೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಇದಕ್ಕೆ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದುದೂ ಒಂದು ಕಾರಣವಾಗಿತ್ತು. ಪುರಾತನತೆ ಹಾಗೂ ಸಾಹಿತ್ಯ ಸಮೃದ್ಧಿ ಒಂದು ಭಾಷೆಯನ್ನು ಕ್ಲಾಸಿಕಲ್ ಎಂದು ನಿರ್ಣಯಿಸಲು ಹಿಂದೆ ಇದ್ದ ಮಾನದಂಡಗಳು ಗ್ರೀಕ್, ಲ್ಯಾಟಿಲ್, ಸಂಸ್ಕೃತ, ಪರ್ಶಿಯನ್, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಅನುನಾಸಿಕ ಸಂಧಿ

ಙ, ಞ, ಣ, ನ, ಮ-ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ. ಈ ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿ ಎನಿಸುವುದು. ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ. ವಾಕ್ + ಮಯ = ವಾಙ + ಮಯ = ವಾಙ್ಮಯ (ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ) ಷಟ್ + ಮುಖ = ಷಣ್ + ಮುಖ = ಷಣ್ಮುಖ (ಇಲ್ಲಿ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಶ್ಚುತ್ವ ಸಂಧಿ

‘ಶ್ಚು’ ಎಂದರೆ ಶಕಾರ ಚವರ್ಗಾಕ್ಷರಗಳು. (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ‘ಶ್ಚು’ ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು. ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ. ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ (ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ) ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ (ಸಕಾರಕ್ಕೆ ಚಕಾರ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಗಂಗರು – Gangaru

ಗಂಗ (ರಾಜಮನೆತನ) ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕದಂಬರು – Kadamba

‘ಕದಂಬ’ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು (ಕ್ರಿ.ಶ.೩೪೫-೫೨೫) ಇಂದಿನ ಉತ್ತರ ಕನ್ನಡ ಜಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಛ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಜಶ್ತ್ವಸಂಧಿ

‘ಜಶ್’ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ. ‘ಜಶ್ತ್ವ’ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ. ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ. (1) ದಿಗಂತದಲ್ಲಿ ಪಸರಿಸಿತು. (2) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ. (3) ಆ ಹುಡುಗನ ಹೆಸರು ಸದಾನಂದ ಎಂದು. (4) ಅಬ್ಧಿ ಎಂದರೆ ಸಾಗರಕ್ಕೆ ಹೆಸರು. ಈ ವಾಕ್ಯಗಳಲ್ಲಿ ಬಂದಿರುವ ‘ದಿಗಂತ’, ‘ಅಜಂತ’, ಷಡಾನನ’, ‘ಸದಾನಂದ’, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಯಣ್ ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ. ಅದರ ಪ್ರಕಾರ ‘ಯಣ್’ ಎಂದರೆ “ಯ ವ ರ ಲ” ಈ ನಾಲ್ಕು ವ್ಯಂಜನಗಳು. ‘ಯಣ್’ ಸಂಧಿ0ಯ0ದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ. ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:- (1) ಅವನು ಅತ್ಯಂತ ಪರಾಕ್ರಮಿ. (2) ಈ ಮನ್ವಂತರದಲ್ಲಿ ನಡೆಯಿತು. (3) ನಮ್ಮದು ಪಿತ್ರಾರ್ಜಿತವಾದ ಆಸ್ತಿ. ಈ ಮೂರು ವಾಕ್ಯಗಳಲ್ಲಿ ಬಂದಿರುವ ‘ಅತ್ಯಂತ’ ‘ಮನ್ವಂತರ’ ‘ಪಿತ್ರಾರ್ಜಿತ’ ಈ ಶಬ್ದಗಳನ್ನು ಬಿಡಿಸಿ ಬರೆದರೆ:- (1) ಅತಿ + ಅಂತ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವೃದ್ಧಿಸಂಧಿ

(1) ಅವನು ಏಕೈಕ ವೀರನು. (2) ಕೃಷ್ಣ ದೇವರಾಯ ಅಷ್ಟ್ಯಶ್ವರ್ಯ ದಿಂದ ಕೂಡಿದ್ದನು. (3) ಹಿಮಾಲಯದಲ್ಲಿ ವನೌಷಧಿಗಳುಂಟು. (4) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ. ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ‘ಏಕೈಕ’, ‘ಅಷ್ಟ್ಯಶ್ವರ್ಯ’, ‘ವನೌಷಧಿ’, ‘ಮಹೌನ್ನತ್ಯ’ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು:- ಏಕ + ಏಕ = ಏಕ್ + ಐಕ (ಅ + ಏ + ಐ) (ಅ + ಏ) ಅಷ್ಟ + ಐಶ್ವರ್ಯ = ಅಷ್ಟ + ಐಶ್ವರ್ಯ = […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು

ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಲ್ಲೊಂದು. ಇದರ ಹಿಂದಿನ ಹೆಸರು ಮೈಸೂರು ಸಂಸ್ಥಾನ. ಉತ್ತರದಲ್ಲಿ ಕೃಷ್ಣಾ ಮತ್ತು ದಕ್ಷಿಣದಲ್ಲಿ ಕಾವೇರಿ ನದಿ ವ್ಯವಸ್ಥೆಗಳಿಂದ ಕೂಡಿ ದಖನ್ ಪ್ರಸ್ಥಭೂಮಿಯ ನೈಋತ್ಯ ಭಾಗದಲ್ಲಿ, ಉ.ಅ. 11 ಡಿಗ್ರಿ 3′ ನಿಂದ 18ಡಿಗ್ರಿ 45′ ವರೆಗೂ ಪೂ.ರೇ. 74 ಡಿಗ್ರಿ 12′ ನಿಂದ 78ಡಿಗ್ರಿ 40′ ವರೆಗೂ ಹಬ್ಬಿರುವ ಈ ನಾಡಿಗೆ ಕರ್ನಾಟಕ, ಕನ್ನಡ ನಾಡು, ಕರುನಾಡು ಎಂಬ ಹೆಸರುಗಳೂ ಇವೆ. ವಾಯವ್ಯ ಮತ್ತು ಉತ್ತರ ದಿಕ್ಕುಗಳಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರಪ್ರದೇಶ, ಆಗ್ನೇಯ ದಕ್ಷಿಣಗಳಲ್ಲಿ ತಮಿಳುನಾಡು, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕುವೆಂಪು

ಕನ್ನಡ ನಾಡಿನ ಹೆಮ್ಮೆಯ ರಸಕವಿ ಕುವೆಂಪು ಅವರು. ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದ ಕವಿ ಜಗದ ಕವಿ ಎಂದು ಕೀರ್ತಿತರಾದವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂ ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು. ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು; ಎಂಬ ಭಿನ್ನಹದೊಂದಿಗೆ ಕಳೆದ ಶತಮಾನದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ದತ್ತಾತ್ರೆಯ ರಾಮಚಂದ್ರ ಬೇಂದ್ರೆ (ದ ರಾ ಬೇಂದ್ರೆ)

ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು.  ಅವರ ತಂದೆ ರಾಮಚಂದ್ರ ಪಂತರು.  ತಾಯಿ ಅಂಬೂ ತಾಯಿ.  ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡಕುಟುಂಬ ಆಸರೆ ಪಡೆಯಿತು.  ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು.   ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕನ್ನಡ ಭಾಷೆಯ ಪ್ರಾಚೀನತೆ

ಕನ್ನಡದ ಪ್ರಾಚೀನತೆಯನ್ನು ತೀರ್ಮಾನಿಸಲು, ಬೇರೆ ಭಾಷೆಗಳ ಬರವಣಿಗೆಯ ದಾಖಲೆಗಳಲ್ಲಿ, ನಮ್ಮ ನಾಡು ಮತ್ತು ನುಡಿಗಳ ಬಗ್ಗೆ ಇರುವ ಉಲ್ಲೇಖಗಳನ್ನು ಹುಡುಕುವ ಅಭ್ಯಾಸವು ಮೊದಲಿನಿಂದಲೂ ರೂಢಿಯಲ್ಲಿದೆ. ಇದು ಅಷ್ಟೇನೂ ಸಮಾಧಾನಕರವಾದ ವಿಧಾನವಲ್ಲ. ಹಾಗೆಂದು ಅದಕ್ಕಿಂತ ಭಿನ್ನವಾದ ಹಾದಿಗಳನ್ನು ಸೂಚಿಸುವುದೂ ಕಷ್ಟಸಾಧ್ಯವೇ. ಎರಡನೆಯಯದಾಗಿ, ಇಂತಹ ಹುಡುಕಾಟಗಳು ಬರವಣಿಗೆಯಲ್ಲಿರುವ ದಾಖಲೆಗಳಿಗೆ ಅತಿಯಾದ ಮಹತ್ವವನ್ನು ಕೊಟ್ಟು, ಮೌಖಿಕ ಪರಂಪರೆಯಲ್ಲಿ ಅಡಗಿರಬಹುದಾದ ಮಾಹಿತಿಗಳನ್ನು ನಿರ್ಲಕ್ಷಿಸುತ್ತವೆ. ಹಾಗೆ ನೋಡಿದರೆ, ಒಂದು ಭಾಷೆಯ ಇರುವಿಕೆಯ ಬಗ್ಗೆ ಬರವಣಿಗೆಯ ಸಾಕ್ಷಿಗಳು ಇಲ್ಲವೆಂದ ಮಾತ್ರಕ್ಕೆ, ಒಂದಲ್ಲ ಒಂದು ರೀತಿಯಲ್ಲಿ ಆ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಸವರ್ಣದೀರ್ಘ ಸಂಧಿ

ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ  ಆಗುತ್ತದೆ. ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು. ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ. (ಅ) ವಿದ್ಯಾಭ್ಯಾಸ ಮಾಡಿದನು. (ಆ) ರಾಮಾಯಣವನ್ನು ಓದು. (ಇ) ಹರೀಶ್ವರನು ಕನ್ನಡ ಕವಿ. (ಈ) ಗುರೂಪದೇಶವನ್ನು ಪಡೆ. ಈ ವಾಕ್ಯಗಳಲ್ಲಿ ‘ವಿದ್ಯಾಭ್ಯಾಸ’ ‘ರಾಮಾಯಣ’ ‘ಹರೀಶ್ವರ’ ‘ಗುರೂಪದೇಶ’ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರ್ಯಗಳನ್ನು ಗಮನಿಸಿರಿ. ವಿದ್ಯಾ + […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ