ನವೆಂಬರ್ 1ರಂದೇ ಏಕೆ ಕನ್ನಡ ರಾಜ್ಯೋತ್ಸವ; ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ..

ನವೆಂಬರ್‌ 1 ಬಂತೆಂದರೆ ಕರ್ನಾಟಕದ ಬೀದಿ ಬೀದಿಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತವೆ, ಮೈಕ್‌ಗಳಲ್ಲಿ ಕನ್ನಡದ ಗೀತೆಗಳು ಮೊಳಗುತ್ತವೆ, ನವೆಂಬರ್‌ ತಿಂಗಳಿಡೀ ಇನ್ನಿಲ್ಲದ ಭಾಷಾಭಿಮಾನ ಮೈತುಂಬುತ್ತದೆ. ಪ್ರತಿ ವರ್ಷ ನವೆಂಬರ್‌ 1ರಂದು ರಾಜ್ಯೋತ್ಸವ ಆಚರಿಸುವುದು ರೂಢಿ. ನವೆಂಬರ್‌ 1ರಂದೇ ಕನ್ನಡ ರಾಜ್ಯೋತ್ಸವ ಆಚರಿಸುವುದರ ಹಿಂದೆ ಕರ್ನಾಟಕ ಏಕೀಕರಣದ ಕಥೆಯಿದೆ. ಕರ್ನಾಟಕ ಏಕೀಕರಣ ಚಳವಳಿಯು ಭಾರತ ಸ್ವಾತಂತ್ರ್ಯ ಚಳವಳಿಯ ಜತೆಜತೆಗೇ ನಡೆದುಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಬ್ರಿಟಿಷ್‌ ಸರಕಾರ ಕೊನೆಗೂ ಮಣಿದಿತ್ತು. ಆದರೆ, ಕರ್ನಾಟಕ ಏಕೀಕರಣ ಸುಲಭವಾಗಿ ಆಗಲಿಲ್ಲ. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಬೆಳಕಿನ ಹಬ್ಬ ದೀಪಾವಳಿಯ ಮಹತ್ವ

ದೀಪಾವಳಿ ಇದೊಂದು ಬೆಳಕಿನ ಹಬ್ಬ. ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ. ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕನ್ನಡ ರಾಜ್ಯೋತ್ಸವದ ಕಿರು ಪರಿಚಯ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇತಿಹಾಸ : ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ದಸರಾ ಹಿನ್ನೆಲೆ-ಇತಿಹಾಸ, ಆಚರಣೆಗಳ ಮಹತ್ವ

ನವರಾತ್ರಿಯ ಇತಿಹಾಸ : ನವರಾತ್ರಿ .. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ.. ದುರ್ಗಾ ಮಾತೆಯನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ವಿಜಯ ದಶಮಿ ಎಂದರೆ ಯುದ್ಧದಲ್ಲಿ ಜಯ ಗಳಿಸಿದ ನೆನಪಿಗಾಗಿ ಆಚರಿಸುವ ದಿನ ಎಂಬುದು ಇತಿಹಾಸಗಳಲ್ಲಿ ಉಲ್ಲೇಖವಾಗಿದೆ ಮೈಸೂರಿನ  ವಿಜಯ ದಶಮಿ ಗೆ ವಿಶೇಷ ಪಾರಂಪರಿಕ ಇತಿಹಾಸವಿದೆ.  ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿದ್ರು.. ದೇವರಿಂದ ಮಹೋನ್ನತ ವರವನ್ನು ಪಡೆದಿದ್ದರಿಂದ ಗರ್ವದಿಂದ ಎಲ್ಲರಿಗೂ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಾಸ್ತು ಕಲೆ

ಕರ್ನಾಟಕವು ಭಾರತದ ಅತ್ಯಂತ ಪ್ರಾಚೀನ ರಾಷ್ಟ್ರಗಳಲ್ಲೊಂದು. ಇಲ್ಲಿನ ಸಂಸ್ಕತಿಯೂ ಪ್ರಾಚೀನ ಮತ್ತು ಶ್ರೀಮಂತ. ಒಂದು ನಾಡಿನ ಅಥವಾ ಪ್ರದೇಶದ ಉತ್ತಮ ಸಾಧನೆಗಳು ಎಂದಾಗ, ಈವರೆಗೆ ಆ ನಾಡಿನಲ್ಲಿ ಆಗಿರುವ ಸಾಹಿತ್ಯ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿನ ಮಹತ್ವದ ಸಾಧನೆಗಳು. ಈ ಸಾಧನೆಗಳು ಆ ನಾಡಿನ ಜನರ ಮೌಲ್ಯಗಳ ತಿರುಳು. ತಾಳಗುಂದದ ಪ್ರಣವೇಶ್ವರ ದೇವಾಲಯದಿಂದ ಆರಂಭಿಸಿ ಇತ್ತೀಚಿನ ಯಾವುದೇ ದೇವಾಲಯದ ವಾಸ್ತುವಿನ ಬಗೆಗೆ ಅಧ್ಯಯನ ಮಾಡುವ ಯಾರಿಗಾದರೂ ಇಲ್ಲಿನ ಬೆಳವಣಿಗೆಯು ಬೆರಗು ಹುಟ್ಟಿಸುತ್ತದೆ. ಬಹುತೇಕ ತಾಳಗುಂದದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ