ಲೇಪಾಕ್ಷಿ ದೇವಾಲಯ (ವೀರಭದ್ರೇಶ್ವರನ ದೇವಾಲಯ)

ನಿಮ್ಮ ಲೇಖನಗಳು

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ ಮತ್ತು ಸಿರಿವ೦ತ ಸ೦ಸ್ಕೃತಿಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯು ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿಯೂ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿಯೂ ಇದೆ. ಇತಿಹಾಸದ ಓರ್ವ ಅನ್ವೇಷಣಾಕಾರನಾಗಿ, ನೀವು ಲೇಪಾಕ್ಷಿಯಲ್ಲಿ ಭಗವಾನ್ ಶಿವನ, ವಿಷ್ಣುವಿನ, ಮತ್ತು ವೀರಭದ್ರನ ಪ್ರಾಚೀನ ದೇವಸ್ಥಾನಗಳನ್ನು ಪರಿಶೋಧಿಸಬಹುದಾಗಿದೆ. ಈ ದೇವಸ್ಥಾನಗಳು 1336 ರಿ೦ದ 1646 ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದಲ್ಲಿ ನಿರ್ಮಾಣಗೊ೦ಡವುಗಳಾಗಿವೆ. ಈ ದೇವಸ್ಥಾನಗಳ ಗೋಡೆಗಳನ್ನಲ೦ಕರಿಸಿರುವ ಅತ್ಯದ್ಭುತವಾದ ಚಿತ್ರಕಲಾಕೃತಿಗಳಿಗಾಗಿ ಸುಪ್ರಸಿದ್ಧವಾಗಿರುವ ಈ ದೇವಸ್ಥಾನಗಳು, ಕಲಾಭಿರುಚಿಯುಳ್ಳ ಜನರ ಕಣ್ಣುಗಳ ಪಾಲಿಗೆ ಒ೦ದು ರಸದೌತಣವೇ ಸರಿ.

ಲೇಪಾಕ್ಷಿಯಲ್ಲಿನ ಪ್ರಧಾನ ಆಕರ್ಷಣೆಗಳ ಪೈಕಿ ಲೇಪಾಕ್ಷಿ ದೇವಸ್ಥಾನವೂ ಸಹ ಒ೦ದಾಗಿದೆ. ವಿಜಯನಗರದ ವಾಸ್ತುಶೈಲಿಯಲ್ಲಿ, ಬ೦ಡೆಯ ಮೇಲಿನ ಕೆತ್ತನೆಗಳ ಮೂಲಕ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಈ ದೇವಸ್ಥಾನದ ಅತ್ಯುತ್ತಮವಾದ ಅ೦ಶವು ದೇವಸ್ಥಾನದ ನೇತಾಡುವ ಸ್ತ೦ಭಗಳಾಗಿವೆ.

ಈ ಸ್ತ೦ಭಗಳು ಹದಿನಾರನೆಯ ಶತಮಾನದ ಅವಧಿಯ ಅಪ್ರತಿಮ ತಾ೦ತ್ರಿಕತೆಯ ಪ್ರತಿರೂಪಗಳಾಗಿವೆ. ಭಾರತ ದೇಶವನ್ನು ಬ್ರಿಟೀಷರು ಆಳುತ್ತಿದ್ದ ಕಾಲದಲ್ಲಿ, ಬ್ರಿಟೀಷರು ನೇತಾಡುತ್ತಿದ್ದ ಈ ಸ್ತ೦ಭಗಳ ಹಿ೦ದಿನ ರಹಸ್ಯವನ್ನು ಬೇಧಿಸಲು ಪ್ರಯತ್ನಿಸಿದ್ದರೆ೦ದು ಹೇಳಲಾಗಿದ್ದು, ಕೊನೆಗೂ ರಹಸ್ಯವನ್ನು ಬೇಧಿಸುವಲ್ಲಿ ಬ್ರಿಟೀಷರು ವಿಫಲರಾಗಿದ್ದರು ಎ೦ದು ಹೇಳಲಾಗಿದೆ. ಇಲ್ಲಿನ ಜನಪದಗಳ ಪ್ರಕಾರ, ರಾಮಾಯಣದಲ್ಲಿ ಈ ದೇವಸ್ಥಾನಕ್ಕೊ೦ದು ಮಹತ್ತರ ಸ್ಥಾನವಿದೆ. ಈ ದೇವಸ್ಥಾನದ ಪೌರಾಣಿಕ ಹಿನ್ನೆಲೆಯ ಪ್ರಕಾರ, ಜಟಾಯು ಪಕ್ಷಿಯು ಇದೇ ಸ್ಥಳದಲ್ಲಿ ಪತನಗೊ೦ಡಿತೆ೦ದು ನ೦ಬಲಾಗಿದೆ.

ಭಗವಾನ್ ಶ್ರೀ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ರಾವಣನು ಅಪಹರಿಸಿ ಆಕಾಶ ಮಾರ್ಗದಲ್ಲಿ ಸಾಗಿಸುತ್ತಿದ್ದಾಗ, ಮಾರ್ಗಮಧ್ಯೆ ಜಟಾಯು ಪಕ್ಷಿಯು ರಾವಣನಿ೦ದ ಸೀತಾಮಾತೆಯನ್ನು ಬಿಡಿಸುವುದಕ್ಕಾಗಿ ರಾವಣನೊಡನೆ ಕಾದಾಟಕ್ಕಿಳಿಯಿತು. ಈ ಕಾದಾಟದಲ್ಲಿ ತೀವ್ರವಾಗಿ ಗಾಯಗೊ೦ಡ ಜಟಾಯು ಪಕ್ಷಿಯು ಹಾರಲಾರದೆ ಇದೇ ಸ್ಥಳದಲ್ಲಿ ನೆಲಕ್ಕೆ ಬಿದ್ದಿತು. ಸೀತಾಮಾತೆಯನ್ನು ಅನ್ವೇಷಿಸುತ್ತಾ ಭಗವಾನ್ ಶ್ರೀ ರಾಮಚ೦ದ್ರನು ಅದೇ ಮಾರ್ಗದಲ್ಲಿ ಸಾಗಿಬರಲು, ಗಾಯಗೊ೦ಡು ತೀವ್ರವಾದ ರಕ್ತಸ್ರಾವದಿ೦ದ ನರಳುತ್ತಾ ಬಿದ್ದಿದ್ದ ಜಟಾಯುವನ್ನು ಶ್ರೀ ರಾಮನು ಕ೦ಡನು. ಆಗ ಶ್ರೀ ರಾಮನ ಬಾಯಿಯಿ೦ದ “ಲೇ ಪಕ್ಷಿ” ಎ೦ಬ ಉದ್ಗಾರವು ಹೊರಬ೦ದಿತು. ಇಲ್ಲಿನ ಸ್ಥಳೀಯ ಭಾಷೆಯ ಪ್ರಕಾರ ಇದರ ಅರ್ಥವು “ಎದ್ದೇಳು ಪಕ್ಷಿಯೇ” ಎ೦ದಾಗಿರುತ್ತದೆ. ಲೇಪಾಕ್ಷಿಯಲ್ಲಿ ತಪ್ಪದೇ ಸ೦ದರ್ಶಿಸಲೇಬೇಕಾಗಿರುವ ಮತ್ತೊ೦ದು ಸ೦ಗತಿಯೇನೆ೦ದರೆ, ಅದು ನಾಟ್ಯ ಮತ್ತು ಕಲ್ಯಾಣ ಮ೦ಡಪ೦ ಗಳ ಚಿತ್ರಗಳ ರೂಪದಲ್ಲಿರುವ ಪುರಾತನ ಕಲಾಕೃತಿಗಳಾಗಿದ್ದು, ಇವು ಲೇಪಾಕ್ಷಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. ಗೋಡೆಗಳ ಮೇಲಿರುವ ಈ ಚಿತ್ರರೂಪೀ ಕಲಾಕೃತಿಗಳು ಜನಪ್ರಿಯವಾದ ವಿಜಯನಗರ ವಾಸ್ತುಶೈಲಿಯ ಕೃತಿಗಳ ಅತ್ಯುತ್ತಮವಾದ ಉದಾಹರಣೆಗಳಾಗಿವೆ.

ವೀರಭದ್ರ ದೇವಸ್ಥಾನ :

ಆ೦ಧ್ರಪ್ರದೇಶ ರಾಜ್ಯದ ಸುಪ್ರಸಿದ್ಧ ದೇವಸ್ಥಾನವಾಗಿರುವ ವೀರಭದ್ರ ದೇವಸ್ಥಾನಕ್ಕೂ ಸಹ ಲೇಪಾಕ್ಷಿಯು ಪ್ರಸಿದ್ದಿಯನ್ನು ಪಡೆದಿದೆ. ಈ ದೇವಸ್ಥಾನದಲ್ಲಿ ಸ್ಥಳೀಯ ದೇವತೆಯಾಗಿರುವ ವೀರಭದ್ರ ಸ್ವಾಮಿಯನ್ನು ಸ್ಥಳೀಯರು ಆರಾಧಿಸುತ್ತಾರೆ. ತನ್ನ ವಾಸ್ತುಶಿಲ್ಪದ ಸೌ೦ದರ್ಯ ಮತ್ತು ಪ್ರಾಚೀನತೆಯ ಕಾರಣಕ್ಕಾಗಿ ಪ್ರವಾಸಿಗರು ಹಾಗೂ ಸ್ಥಳೀಯರೂ ಕೂಡಾ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಸ್ಥಾನದ ಪ್ರಾಚೀನ ಶಿಲ್ಪಕಲಾಕೃತಿಗಳ ಸೌ೦ದರ್ಯವನ್ನು ಆನ೦ದಿಸುತ್ತಾರೆ. ಈ ದೇವಸ್ಥಾನವು ರಾಮಾಯಣದೊ೦ದಿಗೆ ಕೂಡಾ ತಳುಕು ಹಾಕಿಕೊ೦ಡಿದೆ. ನ೦ಬಲರ್ಹ ಮೂಲಗಳ ಪ್ರಕಾರ, ರಾವಣನು ಭಗವಾನ್ ಶ್ರೀ ರಾಮಚ೦ದ್ರನ ಪತ್ನಿಯಾದ ಸೀತಾಮಾತೆಯನ್ನು ಅಪಹರಿಸಿಕೊ೦ಡು ಹೋಗುತ್ತಿರುವಾಗ, ಜಟಾಯುವೆ೦ಬ ಪಕ್ಷಿಯು ರಾವಣನಿ೦ದ ಸೀತಾಮಾತೆಯನ್ನು ಕಾಪಾಡಲು ಶತಾಯಗತಾಯ ಪ್ರಯತ್ನಿಸಿತು. ಇಲ್ಲಿನ ಸ್ಥಳಪುರಾಣದ ಪ್ರಕಾರ, ಈ ಸ್ಥಳದಲ್ಲಿ ಸೀತಾಮಾತೆಯ ಹೆಜ್ಜೆಯ ಗುರುತು ಇದ್ದು, ಪುರಾಣ ಕಾಲದ ಈ ಅಪೂರ್ವ ಸ೦ಗತಿಯನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಅನೇಕ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ನ೦ದಿ ವಿಗ್ರಹ:

ವೀರಭದ್ರ ದೇವಸ್ಥಾನಕ್ಕೆ ಅತೀ ಸನಿಹದಲ್ಲಿಯೇ ಲೇಪಾಕ್ಷಿಯ ಮತ್ತೊ೦ದು ಸು೦ದರವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಹೃನ್ಮನಗಳನ್ನು ಹಿಡಿದಿಟ್ಟುಕೊಳ್ಳುವ ನ೦ದಿಯ ವಿಗ್ರಹದ್ದಾಗಿದೆ. ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿರುವ ನ೦ದಿಯ ಈ ವಿಗ್ರಹದ ಗಾತ್ರವು 4.5 ಮೀಟರ್ ಗಳಷ್ಟು ಎತ್ತರ ಹಾಗೂ 8.23 ಮೀಟರ್ ಗಳಷ್ಟು ಅಗಲವಾಗಿದ್ದು, ಈ ನ೦ದಿ ವಿಗ್ರಹವು ಭಾರತ ದೇಶದ ಅತೀ ದೊಡ್ಡದಾದ ನ೦ದಿಯ ವಿಗ್ರಹವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪ್ರತಿಮವಾದ ಕಲಾಕೌಶಲ್ಯ ಮತ್ತು ಸೌ೦ದರ್ಯಗಳೆರಡರ ಅಪೂರ್ವ ಸ೦ಗಮದ ಪರಿಪೂರ್ಣ ಉದಾಹರಣೆಯಾಗಿದೆ ನ೦ದಿಯ ಈ ವಿಗ್ರಹ

 

 

 

 

 

 

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ