ಬೆಂಗಳೂರು ಅರಮನೆ (Bengaluru Palace)

ಕರ್ನಾಟಕ ದರ್ಶನ ಕರ್ನಾಟಕದ ಇತಿಹಾಸ

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ.ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು. 45000 ಚದರ ಅಡಿ ವಿಸ್ತಿರ್ಣ ಹೊಂದಿರುವ ಈ ಅರಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 82 ವರ್ಷಗಳು ಬೇಕಾಯಿತು.ಇದರ ಸೌಂದರ್ಯವು ಎಷ್ಟೊಂದು ಹೆಸರುವಾಸಿಯಾಗಿದೆ ಎಂದರೆ, ಒಮ್ಮೆ ನೀವು ಮುಖದ್ವಾರದ ಮೂಲಕ ಒಳಗೆ ಪ್ರವೇಶಿಸಿದರೆ, ಅದರ ಅದ್ವಿತೀಯ ಸೌಂದರ್ಯವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅರಮನೆಯು ಇತ್ತಿಚಿಗಷ್ಟೆ ನವೀಕರಣಗೊಂಡಿದೆ.ಇದರ ಒಳಾಂಗಣ ವಿನ್ಯಾಸವು ತುಡಾನ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಅರಮನೆಯ ಕೆಳಮಹಡಿಯು ತೆರೆದ ಅಂಗಳವನ್ನು ಹೊಂದಿದ್ದು, ಕೂಡಲು ಗ್ರಾನೈಟ್ ಕಲ್ಲಿನ ಕಟ್ಟೆಗಳನ್ನು ಕೆತ್ತಲಾಗಿದೆ.ಇವುಗಳು ತಮ್ಮ ಮೆಲ್ಮೈ ಮೇಲೆ ನೀಲಿ ಬಣ್ಣದ ಟಾಯಿಲಗಳನ್ನು ಹೊಂದಿದ್ದು ರಾತ್ರಿಯಲ್ಲಿ ನೋಡಲು ಸೊಗಸಾಗಿರುತ್ತವೆ. ರಾಜನು ಸಭೆ ನಡೆಸುತ್ತಿದ್ದ ವಿಶಾಲವಾದ ದರ್ಬಾರ ಹಾಲ್ ಅನ್ನು ಮೆಲ್ಮಹಡಿಯಲ್ಲಿ ಕಾಣಬಹುದು. ಅರಮನೆಯ ಒಳಗೊಡೆಗಳು ಗ್ರೀಕ್,ಡಚ್ ಮತ್ತು ಪ್ರಸಿದ್ಧನಾದ ರಾಜಾ ರವಿವರ್ಮನ ಚಿತ್ರಕಲೆಗಳಿಂದ ಅಲಂಕೃತಗೊಂಡಿದ್ದು ನೋಡಲು ಸುಂದರವಾಗಿವೆ.

 

 

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ