ದಸರಾ ಹಿನ್ನೆಲೆ-ಇತಿಹಾಸ, ಆಚರಣೆಗಳ ಮಹತ್ವ

ಕನ್ನಡ ಸಂಸ್ಕೃತಿ

ನವರಾತ್ರಿಯ ಇತಿಹಾಸ :

ನವರಾತ್ರಿ .. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ.. ದುರ್ಗಾ ಮಾತೆಯನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ವಿಜಯ ದಶಮಿ ಎಂದರೆ ಯುದ್ಧದಲ್ಲಿ ಜಯ ಗಳಿಸಿದ ನೆನಪಿಗಾಗಿ ಆಚರಿಸುವ ದಿನ ಎಂಬುದು ಇತಿಹಾಸಗಳಲ್ಲಿ ಉಲ್ಲೇಖವಾಗಿದೆ


ಮೈಸೂರಿನ  ವಿಜಯ ದಶಮಿ ಗೆ ವಿಶೇಷ ಪಾರಂಪರಿಕ ಇತಿಹಾಸವಿದೆ.  ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿದ್ರು.. ದೇವರಿಂದ ಮಹೋನ್ನತ ವರವನ್ನು ಪಡೆದಿದ್ದರಿಂದ ಗರ್ವದಿಂದ ಎಲ್ಲರಿಗೂ ಉಪದ್ರವ ಕೊಡೋಕೆ ಶುರು ಮಾಡಿದ್ರು.  ಆಗ ಎಲ್ಲರೂ ಸೇರಿ ತಾಯಿ ಚಮುಂಡೇಶ್ವರಿಯನ್ನು ಪ್ರಾರ್ಥಿಸಿ ಮಹಿಶಾಸುರನ ಉಪಟಳದಿಂದ ಪಾರು ಮಾಡುವಂತೆ ಕೇಳಿದ್ರು. ಅಗ ತಾಯಿ ಚಮುಂಡೇಶ್ವರಿಯು ಮಹಿಶಾಸುರನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ್ದಳು.. ಇದೇ ಮೈಸೂರಿನ ವಿಜಯ ದಶಮಿ ಆಚರಣೆಯ ಸಾರಾಂಶವಾಗಿದೆ.. ಎಂಬುದು ಹಲವರ ಅಭಿಪ್ರಾಯ,


ಈ ನವರಾತ್ರಿ ಎಂಬುದನ್ನು ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ,ಆಶ್ವಯುಜ ಮಾಸ, ಶುಕ್ಲಪಕ್ಷದ ಹತ್ತನೆಯ ದಿನ. ಒಂಭತ್ತು ದಿನಗಳ ಕಾಲ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ, ಕೊನೆಗೆ ಹತ್ತನೆಯ ದಿನದಂದು ಅಂದ್ರೆ ‘ದಶಹರ’ದಂದು ದಶಕಂಠ ರಾವಣ ನನ್ನು ಸಂಹರಿಸುವುದರ ಮೂಲಕ ವಿಜಯೋತ್ಸವನ್ನು ಅಚರಿಸಲಾಯ್ತು.. ಈ ವಿಜಯೋತ್ಸವವನ್ನೇ ವಿಜಯ ದಶಮಿ ಎಂಬುದು ಹಲವು ಕಡೆ ಪ್ರತೀತಿ ಇದೆ.

ಮತ್ತೊಂದು ವಿಚಿತ್ರ ಎಂದರೆ, ಮಹಾಭಾರತದ ಪಾಂಡವರು ಕೌರವ ಸೇನೆಯನ್ನು ಯುದ್ಧದಲ್ಲಿ ಸೋಲಿಸಿದ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಗುತ್ತದೆ ಎಂಬ ಗೊಂದಲಗಳೂ ಇವೆ. ಆದರೆ ಕುರುಕ್ಷೇತ್ರ ನಡೆದದ್ದು ೧೮ ದಿನಗಳ ಕಾಲ.. ಹೀಗಾಗಿ ವಿಜಯ ದಶಮಿ ಹಬ್ಬ ಆರಂಬವಾಗಿರುವುದು ರಾಮಾಯಣದ ಕಾಲದಲ್ಲಿ ಎಂಬುದು ಸ್ಪಷ್ಟವಾಗುತ್ತದೆ.

ಈ ವಿಜಯ ದಶಮಿಯನ್ನು ಕರ್ನಾಟಕದಲ್ಲಿ ಆಚರಣೆಗೆ ತಂದವರು ಮೈಸೂರು ರಾಜರು ಎಂಬ ಸುದ್ದಿ ಇದೆ. ಆದ್ರೆ ಮೂಲತಃವಾಗಿ ಈ ಆಚರಣೆಯನ್ನು ತಂದವರು ವಿಜಯ ನಗರ ಸಾಮ್ರಾಜ್ಯದ ಅರಸರು.. ಆದ್ರೆ ಕ್ರಿ.ಶ 1565  ರಲ್ಲಿ ತಾಳಿಕೋಟೆ ಯುದ್ದದಲ್ಲಿ ವಿಜಯ ನಗರ ಸಾಮ್ರಾಜ್ಯ ಅಂತ್ಯವಾದಮೇಲೆ ಮೈಸೂರಿನ ರಾಜ ಒಡೆಯರ‍್ ರವರು 1610 ರಲ್ಲಿ ಆ ಸಂಪ್ರದಾಯವನ್ನು ಮೈಸೂರಿನ ಸಂಸ್ಥಾನದಲ್ಲಿ ಮುಂದುವರಿಸಿಕೊಂಡು ಹೋದ್ರು. ಆ ಸಂಪ್ರದಾಯವೇ ಈಗಲೂ ಕೂಡ ವಿಜೃಂಭಣೆಯ ವಿಜಯದಶಮಿ ಆಚರಣೆಗೆ ಹಿಡಿದ ಕೈ ಗನ್ನಡಿಯಾಗಿದೆ.

ಸಂಪ್ರದಾಯಗಳು ಮತ್ತು ಆಚರಣೆಗಳು

೧.       ಈ ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯನ್ನು  ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ.. ದುರ್ಗಾ ಮಾತೆಯ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

Products from Amazon.in


೨.       ಬಂಗಾಲದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ಪಂಜಾಬ್ ರಾಜ್ಯದಲ್ಲಿ ಕೂಡಾ ಉಪವಾಸ ಮತ್ತು ಜಾಗರಣೆ ಹಾಗೂ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ.

೩.        ಈ ನವರಾತ್ರಿಯ ಸಮಯದಲ್ಲಿ ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿಅಂಲಂಕಾರ ಮಾಡುತ್ತಾರೆ. ಆ ಕುಮಾರಿಯರೇ ದೇವಿಯರು ಎಂದು ಭ್ರಮಿಸಿ ಅವರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ನೀಡುತ್ತಾರೆ.. ಅಷ್ಟೇ ಅಲ್ಲ,  ಅವರಿಗೆ ದಕ್ಷಿಣೆಯನ್ನು ಕೊಡಲಾಗುತ್ತದೆ.ಈ ನಿಯಮಗಳು ದೇಶದ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತದೆ.

೪.       ನವರಾತ್ರಿಯ ಸಮಯದಲ್ಲಿ ಬಹಳಷ್ಟು ಮಹಿಳೆಯರು ದೇವಿಯ ಪೂಜೆಗಾಗಿ ಉಪವಾಸ ವ್ರತವನ್ನು ಆಚರಿಸುತ್ತಾರೆ.. ಒಂದು ಹೊತ್ತು ಮಾತ್ರ ಊಟವನ್ನು ಸೇವಿಸುವ ಪದ್ಧತಿಯೂ ಇದೆ.. ಅದೂ ದೇವಿಯ ಪೂಜೆ ಮುಗಿದ ನಂತರ.. ಸಂಜೆ ಅಥವ ರಾತ್ರಿಯ ಸಮಯದಲ್ಲಿ. ಈ ಉಪವಸದ ಸಮಯದಲ್ಲಿ, ಹುರುಳಿ ಕಾಳಿನಿಂದ ಮಾಡಿದ ಪ್ರಸಾದವನ್ನು ಸ್ವೀಕರಿಸಲಾಗುವುದು..

Products from Amazon.in


೫.       ಆಯುಧ ಪೂಜೆ ಸಮಯದಲ್ಲಿ, ನವ ಧಾನ್ಯಗಳನ್ನು ಕೂಡಿಸಿ ನೈವೇದ್ಯವನ್ನು ತಯಾರಿಸಿ ದೇವರಿಗೆ ಸಮರ್ಪಿಸಬೇಕಾಗುತ್ತದೆ.. ಇದು ಎಲ್ಲದಕ್ಕಿಂತ ಅತ್ಯುತ್ತಮವಾದ ಶ್ರೇಷ್ಟ ಪ್ರಸಾದವಾಗಿದ್ದು ದೇವರಿಗೆ ಪ್ರಿಯವಾಗಿರುವುದು ಎಂಬ ಪ್ರತೀತಿ ಇದೆ. ಇದಲ್ಲದೇ, ಹೆಸರುಬೇಳೆ, ಜೋಳದ ಉಸುಳೆ, ಗೋಡಂಬಿಯ ಗ್ರೇವಿ, ಯನ್ನು ಕೂಡ ದೇವರಿಗೆ ಅರ್ಪಿಸಲಾಗುತ್ತದೆ.

ಕರ್ನಾಟಕದಲ್ಲಿ ಏನ್ ಮಾಡ್ತಾರೆ..??

೧.       ನವರಾತ್ರಿಯ ಸಮಯದಲ್ಲಿ ಶಕ್ತಿದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ

೨.       ಹತ್ತನೆಯ ದಿನ ಅಂದ್ರೆ ದಶಮಿಯಂದು ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ


೩.       ನವರಾತ್ರಿಯ ಸಮಯದಲ್ಲಿ ಒಂಭತ್ತು ದಿನಗಳ ಕಾಲ “ಗೊಂಬೆ”ಗಳನ್ನು ಕೂರಿಸುತ್ತಾರೆ. ವಿವಿಧ ಬಗೆಯ ನವರಾತ್ರಿ ವಿಶೆಷವಾದ ಗೊಂಬೆಗಳು, ಶಿವ-ಪಾರ್ವತಿ, ಚಾಮುಂಡೇಶ್ವರಿ, ಸೇರಿದಂತೆ ವಿವಿಧ ದೇವರ ಗೊಂಬೆಗಳು, ಮತ್ತು ಸಾಮಾನ್ಯ ಗೊಂಬೆಗಳನ್ನು ಈ ಒಂಭತ್ತು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗುತ್ತದೆ.

೪. ಆಯುಧಗಳ ಸಹಾಯದಿಂದ ಯುದ್ಧದಲ್ಲಿ ಜಯಿಸಲು ಸಾದ್ಯವಾಗುತ್ತದೆ.  ಹೀಗಾಗಿ ಗೆಲುವಿಗೆ ಕಾರಣವಾದ ಎಲ್ಲಾಬಗೆಯ ಆಯುಧಗಳನ್ನು ಆಯುಧ ಪೂಜೆಯ ಸಮಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.. ಪ್ರಸ್ತುತವಾಗಿ ಜನರು ತಮ್ಮ ಮನೆಯಲ್ಲಿ ಬಳಸುವ ಎಲ್ಲಾ ರೀತಿಯ ಆಯುಧಗಳು, ವಾಹನಗಳು, ಪುಸ್ತಕಗಳು ಹೀಗೆ ತಮ್ಮ ಜೀವನಕ್ಕೆ ಅವಶ್ಯಕವಾದ ವಿವಿಧ ಬಗೆಯ ಆಯುಧಗಳು, ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

Products from Amazon.in


೫.       ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ಮತ್ತು ರಥೋತ್ಸವ ಇರುತ್ತದೆ.. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.. ಮೈಸೂರಿನ ರಜವಂಶವದರು ಅಂಬಾರಿಗೆ ಪೂಜೆ ಸಲ್ಲಿಸುತ್ತಾರೆ.. ನಂತರ ಮಾರನೆಯ ದಿನ ಅಂದ್ರೆ ವಿಜಯ ದಶಮಿಯ ದಿನದಂದು ಆ ಅಂಬಾರಿಯ ಮೇಲೆ ಚಾಮುಂಡೇಶ್ವರಿಯ ವಿಗ್ರಹವನ್ನು ಇಟ್ಟು ಮೆರವಣಿಗೆ ಮಾಡುತ್ತಾರೆ

ಒಂಭತ್ತು ದಿನಗಳ ವಿಶೆಷತೆ : ಮತ್ತು ಹತ್ತನೆ ದಿನದ ವಿಜಯ ದಶಮಿ

೧.       ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ.. ನಂತರ ಗೊಂಬೆಗಳನ್ನು, ಸಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ.. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ.

೨.       ನವರಾತ್ರಿಯ ಎರಡನೆಯ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ.. ತಿರುಪತಿಯಲ್ಲಿಯೂ ಕೂಡ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.. ಮೊದಲ ಮೂರು ದಿನಗಳ ಕಾಲ ದೇವಿಯನ್ನು ರೌದ್ರಾವತಾರದಲ್ಲಿ ಪೂಜಿಸಲಾಗುತ್ತದೆ..

೩.       ಮೂರನೆಯ ದಿನದಂದು ಮಹಿಶಾಸುರ ಮರ್ದಿನಿರೂಪವನ್ನು ಪೂಜಿಸಲಾಗುತ್ತದೆ.. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ ಒಂಭತ್ತನೆಯ ದಿನ ಮಹಾ ಮಾತೆಯು ಸಂಪನ್ನಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಾಳೆ. ,ತ್ತು ಈ ದಿನಗಳಲ್ಲಿ ಶಕ್ತಿ ದೆವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರೂ ನೆರವೇರುತ್ತವೆ ಎಂಬ ನಂಬಿಕೆ ಕೂಡ ಇವೆ. 3 ದಿನದಂದು ತ್ರಿರಾತ್ರೋತ್ಸವ ಅಚರಿಸಬೇಕು ಮತ್ತು ವೆಂಕಟೇಶ್ವರನ ಪೂಜೆ ಮಾಡಬೇಕು

೪.       ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ.. ಈ ದಿನದಂದು ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.. ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೆಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ. ಮನೆಯಲ್ಲಿದ್ದವರು ದೇವಯಿ ಸ್ತೋತ್ರಗಳನ್ನು ಪಠಿಸಬೇಕಾಗುತ್ತದೆ.

5          ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ., 5 ದಿನವಾದ್ದರಿಂದ,ಪಂಚರಾತ್ರೋತ್ಸವವನ್ನು ಅಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿಸುವುದು ಈ ದಿನದಲ್ಲಿ ಉತ್ತಮವಾಗಿರುತ್ತದೆ. ನಂದಾದೀಪಗಳನ್ನು ಸ್ಥಾಪಿಸಬೇಕು.

Products from Amazon.in


 6         ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ.. ಧನ ಲಕ್ಷ್ಮಿಯನ್ನು ಪೂಜಿಸುವಾಗ, ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ಧತಿಯೂ ಇದೆ..  ದೀಪಗಳಿಂದ ಮಹಾ ಮಾತೆಯನ್ನು ಬೆಳಗಿ, ಅಷ್ಟ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. 4, 5, 6 ನೇ ದಿನಗಳಲ್ಲಿ ದೇವಿಯನ್ನು ಮಹಾ ಲಕ್ಷ್ಮಿಯ ರೂಪಗಳಲ್ಲಿ ಪೂಜಿಸಲಾಗುತ್ತದೆ

7.        ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ.. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ.. ಶಾಂತ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ಬೇಡಿದ ವರವನ್ನು ಶಾಂತಿಯಿಂದ ಅನುಗ್ರಹಿಸುವಳು ಎಂದು ಜನರು ನಂಬುತ್ತಾರೆ.

8        ಎಂಟನೆಯ ದಿನವನ್ನು ಅಷ್ಟಮಿ ಎಂದು ಕರೆಯುತ್ತಾರೆ,.. ಅಂದರೆ, ದುರ್ಗಾ ದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದಂದು ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ.. ಕೆಲವೆಡೆ ದುರ್ಗಾಮಾತೆಯ ಜೊತೆಗೆ ಲಕ್ಷ್ಮಿಯ ಪೂಜೆಯನ್ನು ಮಾಡುವ ಪ್ರತೀತಿಯೂ ಇದೆ.. ಪ್ರತಿ ದಿನದಂತೆ ದೇವಿಗೆ ಪೂಜಿಸಿ, ಉಪವಾಸ ವ್ರತ ಮಾಡುತ್ತಾರೆ.. ಕುಂಕುಮಾರ್ಚನೆ ಈ ದಿನಗಳಲ್ಲಿ ನಡೆಯುತ್ತದೆ.

Products from Amazon.in


9        ನವರಾತ್ರಿ ಒಂಭತ್ತನೆಯ ದಿನ ಆಯುಧ ಪೂಜೆ ನಡೆಯುತ್ತೆ.. ಪಾಂಡವರು ವನವಾಸ ಮುಗಿಸುವಸಂದರ್ಭದಲ್ಲಿ ಊರ ಹೊರಗಿನ ಶಮೀವೃಕ್ಷದಲ್ಲಿ ಕಟ್ಟಿಹಾಕಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆಇಳಿಸಿಕೊಂಡು ತಮ್ಮತಮ್ಮ ಆಯುಧಗಳನ್ನು ಪೂಜಿಸಿ  ತಮ್ಮ ಜಯಕ್ಕೋಸ್ಕರವಾಗಿ ಪ್ರಾರ್ಥಿಸಿದರು.  ಹೀಗಾಗಿ  ಈ ಒಂಬತ್ತನೆಯ ದಿನ ಮನೆಗಳಲ್ಲಿ ಇರುವಂಥ ವಾಹನಗಳು, ವಿವಿಧ ಬಗೆಯ ಅಸ್ತ್ರಗಳು, ಎತ್ತುಗಳು, ಬಿತ್ತನೆಗೆ ಬಳಸುವ ನೇಗಿಲು ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು  ದೇವರ ಮನೆಯಲ್ಲಿಟ್ಟು, ಅವುಗಳಿಗೆ ನಿಯಮಬದ್ಧವಾಗಿ ಪೂಜೆ ಸಲ್ಲಿಸಲಾಗುತ್ತದೆ..

ಇದೇ ಸಮಯದಲ್ಲಿ, ಮೈಸೂರಿನಲ್ಲಿನ ಚಿನ್ನದ ಅಂಬಾರಿಯನ್ನು ವಿಧಿವತ್ತಾಗಿ ರಾಜ ಮನೆತನದವರಿಂದ ಪೂಜಿಸಲಾಗುತ್ತದೆ.. 

೧೦.    ಹತ್ತನೆಯ ದಿನದಂದು ವಿಜಯದಶಮಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ವಿಜಯದಸಂಕೇತವಾದ ಶಮೀವೃಕ್ಷವನ್ನುಪೂಜಿಸಿದರೆ ಶತ್ರುಜಯ ಪಾಪ-ಪರಿಹಾರ, ಮುಖ್ಯ ಕಾರ್ಯಗಳಲ್ಲಿವಿಜಯ ದೊರೆಯುತ್ತದೆ. ವಿಜಯ ದಶಮಿಯ ದಿನ ಎಲ್ಲರೂಶಮೀ(ಬನ್ನಿ)ವೃಕ್ಷಕ್ಕೆ ಕುಟುಂಬಸಮೇತ ಹೋಗಿ  “ಅಮಂಗಲಾನಾಂ ಶಮನೀಂಶಮನೀಂ ದುಷ್ಕೃತಸ್ಯ ಚ |  ದುಃಖಪ್ರಣಾಶಿನೀಂ ಧನ್ಯಾಂಪ್ರಪದ್ಯೇsಹಂ ಶಮೀಂ ಶುಭಾಮ್ || ಎಂಬ ಮಂತ್ರದಿಂದಶ್ರದ್ಧಾಭಕ್ತಿಯಿಂದ  ಪೂಜಿಸಬೇಕು.ಮತ್ತು ಎಲ್ಲರಿಗೂ ಬನ್ನಿಯನ್ನು ಹಂಚುವ ಸಂಪ್ರದಯವೂ ಇದೆ.
ವಿಜಯ ದಶಮಿಯ ಸಮಯದಲ್ಲಿ ಮೈಸೂರಿನಲ್ಲಿ ಅಂಬಾರಿಯನ್ನು ಹೊತ್ತುಕೊಂಡ ಜಂಬೂ ಸವಾರಿ ನಡೆಯುತ್ತದೆ.. ಆ ಅಂಬಾರಿಯಲ್ಲಿ ತಯಿ ಚಾಮುಂಡೇಶ್ವರಿಯ ವಿಗ್ರಹವಿರುತ್ತದೆ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ