ಜಿ-ಟಿವಿಯ ಸರಿಗಮಪ ಸಿಜನ್-15ರ ಆಡಿಷನ್‍ನಲ್ಲಿ ಹಾವೇರಿ ಜಿಲ್ಲೆಯ ಹನುಮಂತನ ಹವಾ

ನಿಮ್ಮ ಲೇಖನಗಳು

ಜಿ ವಾಹಿನಿಯಲ್ಲಿ ಸೆ.30ರಂದು ಭಾನುವಾರ ಪ್ರಸಾರವಾದ ಜಿಟಿವಿಯ ಸರಿಗಮಪ ಸಿಜನ್ 15ರ ಆಡಿಷನ್‍ನಲ್ಲಿ ಹಾವೇರಿಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದ ಹನುಮಂತ ಎನ್ನುವ ಪಕ್ಕಾ ಗ್ರಾಮೀಣ ಪ್ರತಿಭೆ ಹಾಡಿದ “ಕೇಳಜಾಣ ಶಿವಜ್ಞಾನ ಮಾಡಬೇಕಣ್ಣ” ಎನ್ನುವ ಜಾನಪದ ಹಾಡು ಜಿ ವೇದಿಕೆಯಲ್ಲಿದ್ದ ಜಡ್ಜಗಳಿಂದ ಹಿಡಿದು ಈಕಾರ್ಯಕ್ರಮವನ್ನು ವೀಕ್ಷಿಸಿದ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ವೀಕ್ಷಕರ ಮನಗೆದ್ದಿದೆ.
ದಕ್ಷಿಣ ಭಾರತದ ಸಂಗೀತ ಮಾಂತ್ರಿಕ ಮಾಹು ಗುರು ಹಂಸಲೇಖ ಅವರೇ ಹನುಮಂತನ ಜಾನಪದ ರಸಗವಳಕ್ಕೆ ತಾವು ಕುಳಿತಿದ್ದ ಸ್ಥಳದಿಂದ ಎದ್ದು ನಿಂತು ತಾವು ಹಾಕಿಕೊಂಡಿದ್ದ ಜಾನಪದ ಶಾಲನ್ನು ಹನುಮಂತನಿಗೆ ಹಾಕಿ ಆತನ ಟವೆಲ್ ತಮ್ಮ ಹೆಗಲಿಗೆ ಹಾಕಿಕೊಂಡರು. ಜಡ್ಜಗಳಾದ ಅರ್ಜುನ ಜನ್ಯ, ಖ್ಯಾತ ಗಾಯಕ ವಿಜಯಪ್ರಕಾಶ, ರಾಜೇಶ ಕೃಷ್ಣನ್ ಅವರುಗಳು ಹನುಂತನ ಜಾನಪದ ಗಾಯನಕ್ಕೆ ಮಂತ್ರಮುಗ್ದರಾಗಿದ್ದರು.
ಹಂಸಲೇಖ ಅವರು ಹನುಮಂತನ ಗಾಯನಕ್ಕೆ ಮನಸೋತು ಜಾನಪದ ಲೋಕದಸಾವಿರಾರು ಜ್ಞಾನಿಗಳು ಕಂಡ ಕನಸು ನನಸಾಗುತ್ತಿದೆ. ದೂರದ ಹಳ್ಳಿಯಲ್ಲಿ ಕುರಿ ಮೇಯಿಸುತ್ತಿದ್ದವ ಇಂದು ಸಂಗೀತ ಸ್ಪರ್ಧೆಆಡಿಷನ್ ನಲ್ಲಿ ಪಾಲ್ಗೊಂಡು ಆಯ್ಕೆ ಯಾಗುತ್ತಿರುವುದಕ್ಕಿಂತ ಇನ್ನೇನು ಬೇಕು ಎಂದರು.

Products from Amazon.in


ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದಿಂದ ಜಿವಾಹಿನಿಯ ರಿಯಾಲಿಟಿ ಶೋದಲ್ಲಿ ಭಾಗವಹಿಸಿಲು ಬಂದಿದ್ದ ಹನುಮಂತ ಒಂದೇ ಹಾಡಿಗೆ ಮೋಡಿಮಾಡಿದ್ದ. ಆತನ ಹಾಡನ್ನು ಮೆಚ್ಚಿ ಕಾರ್ಯಕ್ರಮದ ನಿರ್ಣಯಕಾರು ಹೊಗಳುತ್ತಿದ್ದರೆ ಅಲ್ಲಿ ಏನಾಗುತ್ತಿದೆ ಎಂಬ ಅರಿವು ಇಲ್ಲದೇ ಹನುಮಂತ ನಿಂತಿದ್ದ. ಆಧುನಿಕ ಸೋಗಲಾಡಿ ಪ್ರಪಂಚದ ಗಲೀಜು ಸೋಕದ ಪಕ್ಕಾ ಕಾಡು ಹೂವೊಂದು ಇದೀಗ ತಳಕು ಬಳುಕಿನ ಬಣ್ಣದಲೋಕ ವನ್ನು ಭರ್ಜರಿಯಾಗಿ ಪ್ರವೇಶ ಪಡೆದಿದ್ದು, ಈಹೂವು ಬಣ್ಣದ ಲೋಕದ ತಳಕು-ಬಳಕಿಗೆ ಸಿಲುಕಿ ಬಾಡದಿರಲಿ ಎನ್ನುವುದು ನನ್ನಂತ ನೂರಾರು ಜನರ ಆಶಯವಾಗಿದೆ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ