ಗುಜರಾತನ ಜೋಡಿ ಅತಿಥಿಗಳು ಹಾವೇರಿಯಲ್ಲಿ

ಕರ್ನಾಟಕ ದರ್ಶನ ನಿಮ್ಮ ಲೇಖನಗಳು

ದೂರದ ಗುಜರಾತ್‍ನ ಕಛ್ ಪ್ರಾಂತದಲ್ಲಿ ಕಡುಬರುವ ಅಪರೂಪದ ಗುಜರಾತನ ಜೋಡಿ ಅತಿಥಿಗಳು ಭಾನುವಾರ ಅರೆಮಲೆನಾಡ ಪ್ರದೇಶ ಹಾವೇರಿಯ ಹೊರವೊಲಯದ ಕೆರೆಯೊಂದರಲ್ಲಿ ಕಂಡು ಬಂದವು. ಎಂದಿನಂತೆ ಭಾನುವಾರ ಬೆಳಗ್ಗೆ ನಾನು ಕ್ಯಾಮೇರ ಬ್ಯಾಗಿನೊಂದಿಗೆ ನಗರದ ಹೊರವಲಯದಲ್ಲಿನ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ದಂಡೆಯಲ್ಲಿ ಬೈಕ್ ಮೇಲೆ ಸಾಗುತ್ತಿರುವಾಗ ಕೆರೆಯ ತೀರದಲ್ಲಿ ಕೆಂಪನೆಯ ಮೈಬಣ್ಣದ ಜೋಡಿಗಳು ಗಮನ ಸೆಳೆದವು. ಇವುಗಳು ರಾಜಹಂಸಗಳು ಎನ್ನುವುದನ್ನು ಖಾತ್ರಿಮಾಡಿಕೊಂಡ ನಾನು ಗಕ್ಕನೆ ಬೈಕ್ ಸೈಡಿಗೆ ನಿಲ್ಲಿಸಿ ಕ್ಯಾಮೇರಾವನ್ನು ಹೊರತಗೆದು ಇವುಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಮೂಂದಾದೆ.
ಈಹಿಂದೆ ಅಂದರೆ 2016 ಡಿಸೆಂಬರ್ ಕೊನೆಯಲ್ಲಿ ಹಾವೇರಿಗೆ ಹೊರವಲಯದ ಕೆರೆಯಲ್ಲಿ ಒಟ್ಟು ಮೂರು ರಾಜಹಂಸಗಳು ಕಂಡು ಬಂದಿದ್ದವು. (ಗ್ರೇಟರ್ ಪ್ಲೇಮಿಂಗೋ) ಇದೀಗ ಮತ್ತೆ 2ವರ್ಷಗಳ ನಂತರ ಜೋಡಿ ರಾಜಹಂಸ ಪಕ್ಷಿಗಳು ಕಾಣಿಸಿಕೊಂಡಿವೆ. ರಾಜಹಂಸ್ ಜೋಡಿಗಳ ಬಹಳಹೊತ್ತಿನವರೆಗೆ ನೀರಿನಲ್ಲಿ ಒಂಟಿಕಾಲಿನಲ್ಲಿ ನಿಂತುಕೊಂಡು ತಮ್ಮ ಉದ್ದನೆಯ ಗೋಣನ್ನು ಮೂರುವು ಆಕಾರದಲ್ಲಿ ತಿರಿವಿಕೊಂಡು ಧಾನಸ್ಥ ಸ್ಥಿತಿಗೆ ಇವು ಜಾರಿದ್ದವು.

Products from Amazon.in


ನಾನು ಸುಮಾರು ಒಂದು ಗಂಟೆ ಇವುಗಳ ಚಲನ-ವಲನದ ಪೋಟೋಗಳನ್ನು ಚಿತ್ರೀಸಲು ಕೆರೆಯದಂಡೆಯಲ್ಲಿ ಕಾದು ಕುಳಿತೆ. ನನಗೆ ಕುಳಿತು ಕಾಲುನೋವು ಜೊತೆಗೆ ಬಾರವಾದ ಕ್ಯಾಮೇರಾವನ್ನು ಹಿಡಿದು ಕೈನೋಯತೊಡಗಿದವು. ಆದರೆ ಜೋಡಿ ರಾಜಹಂಸ್ ತಮ್ಮ ಧ್ಯಾನಸ್ಥ ಸ್ಥಿತಿಯಿಂದ ಹೊರಬರಲಿಲ್ಲ.
ಅಷ್ಟರಲ್ಲಿಯೇ ಕೆರೆಯ ದಂಡೆಯ ಮೇಲೆ ಜನರ ಓಡಾಟ, ಜೆಸಿಬಿ ಸದ್ದು, ದನಗಾಹಿಗಳ, ಕುರಿಗಾಯಿಗಳ ಗದ್ದಲಕ್ಕೆ ರಾಜಹಂಸಗಳ ಏಕಾಂತಕ್ಕೆ ಧಕ್ಕೆ ಬಂದಂತಾಯಿತೋ ಎನೋ? ರಾಜ ಹಂಸಗಳು ಮೈಕೊಡವಿಕೊಂಡು ಧ್ಯಾನಸ್ಥ ಸ್ಥಿತಿಯಿಂದ ಹೊರಬಂದವು. ನನಗೂ ಪಕ್ಷಿಗಳಿಗೂ 300ಮೀಟರ್ ಅಂತರವಿದ್ದರೂ ಸಹ ಸೋರ್ಯ ರಷ್ಮಿ ಚೆನ್ನಾಗಿದ್ದರಿಂದ ಉತ್ತಮ ಎನ್ನಬಹುದಾದ ಕೆಲವು ಚಿತ್ರಗಳು ಸೆರೆಸಿಕ್ಕವು.
ರಾಜಹಂಸಗಳನ್ನು ನೋಡುವುದೇ ಚೆಂದ: ಸಾವಿರಾರು ಕಿ.ಮೀ ದೂರದ ಗುಜರಾತ್‍ನ ಕಛ್ ಭಾಗದಲ್ಲಿ ಕಂಡು ಬರುವ ರಾಜಹಂಸಗಳು ಪ್ರತಿವರ್ಷ ಚಳಿಗಾಲ ಆರಂಭಕ್ಕೆ ಈ ಪಕ್ಷಿಗಳು ಬಿಸಿಲು ನಾಡಿಗೆ ವಲಸೆ ಬರುತ್ತವೆ. ಋತುಮಾನಕ್ಕೆ ತಕ್ಕಂತೆ ಸ್ಥಳ ಬದಲಾಯಿಸುವ ವಲಸೆ ಹಕ್ಕಿಗಳೆಂದೂ ಇವುಗಳನ್ನು ಕರೆಯಲಾಗುತ್ತದೆ.
ಇವು ಎಂದಿಗೂ ಒಂಟಿಯಾಗಿ ಸಂಚರಿಸುವುದಿಲ್ಲ. ಇವು ಹೊಸಪೇಟೆಯ ತುಂಗಭದ್ರಾ ಡ್ಯಾಂನ ಹಿನ್ನೀರ ಪ್ರದೇಶಕ್ಕೆ ಹಿಂಡುಗಟ್ಟಲೆ ವಲಸೆ ಬರುತ್ತವೆ. ಹೀಗೆ ಅಲ್ಲಿಗೆ ಹೋಗುವಾಗಿ ಆಗಿರುಬಹುದಾದ ದಣಿವನ್ನು ನಿವಾರಿಸಿಕೊಳ್ಳಲು, ಆಗಿರಬಹುದಾದ ಹಸಿವನ್ನು ತೀರಿಸಿಕೊಳ್ಳಲು ಇವುಗಳ ಹಾವೇರಿ ಹೊರ ವಲಯದಲ್ಲಿ ಇಳಿದಿರುವ ಸಾಧ್ಯತೆಗಳು ಹೆಚ್ಚು!. ನೀರಿನಲ್ಲಿ ಸಿಗುವ ಶಂಕುಹುಳ, ಮೃದ್ದಂಗಿ, ಹುಳ- ಹುಪ್ಪಡಿಗಳನ್ನು ತಿನ್ನಲು ರಾಜಹಂಸಗಳು ಓಡಾಡುವ ದೃಶ್ಯ ನೋಡುವುದೇ ಚೆಂದ. ಸದ್ಯಕ್ಕಂತೂ ಜೋಡಿ ರಾಜಹಂಸಗಳು ಇಲ್ಲಿವೆ, ಇವುಗಳ ಸಂಖ್ಯೆ ಹೆಚ್ಚಾಗುವುದೋ, ದಣಿವಾರಿದ ನಂತರ ಈಜೋಡಿ ಹಾರಿಹೋಗುವುದೋ ಗೊತ್ತಿಲ್ಲ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಹಸಿವಿನಿಂದ ಹೊಟ್ಟೆ ಚುರುಗುಟ್ಟಿತ್ತಿದ್ದರಿಂದ ಒಲ್ಲದ ಮನಸ್ಸಿನಿಂದ ನಾನು ಕ್ಯಾಮೇರವನ್ನು ಬ್ಯಾಗಿಗೆ ಸೇರಿಸಿ ಮನೆತ ಕಡೆಗೆ ಬೈಕ್ ಓಡಿಸಿದೆ.

ಚಿತ್ರ ಲೇಖನ; ಮಾಲತೇಶ ಅಂಗೂರ, ಹಾವೇರಿ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ