ಕ್ರಿಯಾಪದ

ಕನ್ನಡ ವ್ಯಾಕರಣ

ಈ ಪೂರ್ವದಲ್ಲಿ ಧಾತುವೆಂದರೇನು? ಅವು ಎಷ್ಟು ಪ್ರಕಾರ? ಎಂಬುದನ್ನು ಅರಿತಿರಿ.  ಈಗ ಧಾತುಗಳು ಕ್ರಿಯಾಪದ ಗಳಾಗುವ ರೀತಿಯನ್ನು ತಿಳಿಯೋಣ.  ಈ ಕೆಳಗೆ ಕೆಲವು ಕ್ರಿಯಾಪದ ಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ನೋಡೋಣ.

ಕ್ರಿಯಾಪದ ಏಕವಚನ ಧಾತು ಕಾಲಸೂಚಕ ಪ್ರತ್ಯಯ ಆಖ್ಯಾತ ಪ್ರತ್ಯಯ (ಬಹುವಚನ)
(೧) ಮಾಡುತ್ತಾನೆ ಮಾಡು + ಉತ್ತ + ಆನೆ-(ಮಾಡುತ್ತಾರೆ)
(೨) ಮಾಡುತ್ತಾಳೆ ಮಾಡು + ಉತ್ತ + ಆಳೆ-(ಮಾಡುತ್ತಾರೆ)
(೩) ಮಾಡುತ್ತದೆ ಮಾಡು + ಉತ್ತ + ಅದೆ-(ಮಾಡುತ್ತವೆ)
(೪) ಮಾಡುತ್ತೀಯೆ ಮಾಡು + ಉತ್ತ + ಈಯೆ-(ಮಾಡುತ್ತೀರಿ)
(೫) ಮಾಡುತ್ತೇನೆ ಮಾಡು + ಉತ್ತ + ಏನೆ-(ಮಾಡುತ್ತೇವೆ)

Products from Amazon.in

(೧) ಹುಟ್ಟಿದನು ಹುಟ್ಟು + + ಅನು-(ಹುಟ್ಟಿದರು)
(೨) ಹುಟ್ಟಿದಳು ಹುಟ್ಟು + + ಅಳು-(ಹುಟ್ಟಿದರು)
(೩) ಹುಟ್ಟಿತು ಹುಟ್ಟು + + ಇತು-(ಹುಟ್ಟಿದವು)
(೪) ಹುಟ್ಟಿದೆ ಹುಟ್ಟು + + ಎ-(ಹುಟ್ಟಿದಿರಿ)
(೫) ಹುಟ್ಟಿದೆನು ಹುಟ್ಟು + + ಎನು-(ಹುಟ್ಟಿದೆವು)

Products from Amazon.in

(೧) ಬರುವನು ಬರು + + ಅನು-(ಬರುವರು)
(೨) ಬರುವಳು ಬರು + + ಅಳು-(ಬರುವರು)
(೩) ಬರುವುದು ಬರು + + ಉದು-(ಬರುವುವು)
(೪) ಬರುವೆ ಬರು + + ಎ-(ಬರುವಿರಿ)
(೫) ಬರುವೆನು ಬರು + + ಎನು-(ಬರುವೆವು)

ಮೇಲೆ ಐದೈದು ಕ್ರಿಯಾಪದಗಳ ಮೂರು ಗುಂಪುಗಳಿವೆ.  ಮೊದಲಿನ ಐದು ಕ್ರಿಯಾಪದ ಗಳಲ್ಲಿ-ಮಾಡು ಧಾತುವಿನ ಮುಂದೆ ಎಲ್ಲ ಕಡೆಗೂ ಉತ್ತ ಎಂಬ ಪ್ರತ್ಯಯವು ಬಂದು ಅದರ ಮುಂದೆ ಆನೆ, ಆಳೆ, ಅದೆ, ಈಯೆ, ಏನೆ ಎಂಬ ಪ್ರತ್ಯಯಗಳು ಏಕವಚನದಲ್ಲೂ, ಬಹುವಚನದಲ್ಲಿ ಆರೆ, ಆರೆ, ಅವೆ, ಈರಿ, ಏವೆ ಎಂಬ ಪ್ರತ್ಯಯಗಳೂ ಬಂದಿವೆ.

ಎರಡನೆಯ ಐದು ಕ್ರಿಯಾಪದಗಳಲ್ಲಿ ಹುಟ್ಟು ಎಂಬ ಧಾತುವಿನ ಮುಂದೆ ದ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಇತು, ಎ, ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.

ಮೂರನೆಯ ಐದು ಕ್ರಿಯಾಪದಗಳಲ್ಲಿ ಬರು ಎಂಬ ಧಾತುವಿನ ಮುಂದೆ ವ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಉದು, ಎ, ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.

ಮಧ್ಯದಲ್ಲಿ ಮೂರು ಕಡೆಗೆ ಬಂದಿರುವ ಉತ್ತ, ದ, ವ – ಎಂಬುವು ಕಾಲಸೂಚಕ ಪ್ರತ್ಯಯಗಳು* ಅಂದರೆ ಉತ್ತ ಎಂಬುದು ವರ್ತಮಾನಕಾಲವನ್ನೂ, ದ ಎಂಬುದು ಭೂತಕಾಲ ವನ್ನೂ, ವ ಎಂಬುದು ಭವಿಷ್ಯತ್ ಕಾಲವನ್ನೂ ಸೂಚಿಸುತ್ತವೆ ಎಂದು ತಿಳಿಯಬೇಕು.  ಕೊನೆಯಲ್ಲಿ ಬಂದಿರುವ ಆನೆ, ಆಳೆ, ಆರೆ, ಆರೆ, ಅದೆ, ಅವೆ, ಈಯೆ, ಈರಿ, ಏನೆ, ಏವೆ ಇತ್ಯಾದಿ ಪ್ರತ್ಯಯಗಳೆಲ್ಲ ಆಖ್ಯಾತಪ್ರತ್ಯಯಗಳು.

Products from Amazon.in

ಆದ್ದರಿಂದ ಮೇಲೆ ಹೇಳಿದ ಮೂರು ಗುಂಪುಗಳ ಕ್ರಿಯಾಪದಗಳಲ್ಲಿ ಮೊದಲಿನ ಐದು ಕ್ರಿಯಾಪದಗಳ ಗುಂಪು ವರ್ತಮಾನಕಾಲದ (ಈಗ ನಡೆಯುತ್ತಿರುವ) ಕ್ರಿಯೆಯನ್ನೂ, ಎರಡನೆಯ ಐದು ಕ್ರಿಯಾಪದಗಳ ಗುಂಪು ಹಿಂದೆ ನಡೆದ ಕ್ರಿಯೆಯ ಅಂದರೆ ಭೂತಕಾಲದ ಕ್ರಿಯೆಯನ್ನೂ, ಮೂರನೆ ಐದು ಕ್ರಿಯಾಪದಗಳ ಗುಂಪು ಮುಂದೆ ನಡೆಯುವ ಅಂದರೆ ಭವಿಷ್ಯತ್‌ಕಾಲದ ಕ್ರಿಯೆಯನ್ನೂ ಗೊತ್ತುಪಡಿಸುವ ಕ್ರಿಯಾಪದಗಳೆಂದ ಹಾಗಾಯಿತು.  ಹಾಗಾದರೆ ಕ್ರಿಯಾಪದ ಎಂದರೇನೆಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-

 ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನಿಸುವುವು.

ಹೀಗೆ ಆಖ್ಯಾತಪ್ರತ್ಯಯಗಳು ಸೇರುವಾಗ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಕ್ರಮವಾಗಿ ಉತ್ತ, ದ, ವ ಎಂಬ ಕಾಲಸೂಚಕ ಪ್ರತ್ಯಯಗಳು ಆಗಮವಾಗಿ ಬರುತ್ತವೆ.

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ