ಅಂಬರೀಶ್ ಜೀವನ ಪಯಣ

ಸಾಧಕರು

ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (29 ಮೇ 1952 – 24 ನವೆಂಬರ್ 2018) ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬ ಉಪನಾಮವನ್ನು ಗಳಿಸಿದರು.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ 1972ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅಂಬರೀಶ್, ಖಳನಾಯಕನ ಪಾತ್ರದಲ್ಲಿ ಚಿತ್ರರಸಿಕರ ಮನ ಗೆದ್ದಿದ್ದರು. ನಟ ವಿಷ್ಣುವರ್ಧನ್ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬರೀಶ್, ಚಿತ್ರರಂಗದಲ್ಲಿ ಕುಚ್ಚಿಕ್ಕೂ ಗೆಳೆಯರೆಂದೇ ಪ್ರಸಿದ್ಧರು.

Products from Amazon.in

ಮಂಡ್ಯದ ಗಂಡು ಎಂದೇ ಖ್ಯಾತಿ ಗಳಿಸಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಚಿತ್ರರಂಗ ಪ್ರವೇಶಿಸಿದ ಬಳಿಕ ಅಂಬರೀಶ್ ಹೆಸರಿನಿಂದ ಪ್ರಸಿದ್ಧರಾದರು. 1952ರ ಮೇ 29ರಂದು ಜನಿಸಿದ ಅಂಬರೀಶ್ ಬಾಲ್ಯದ ವಿದ್ಯಾಭ್ಯಾಸವನ್ನು ಮಂಡ್ಯದಲ್ಲೇ ಪೂರೈಸಿದರು. 

Products from Amazon.in

ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿ ಮಗನಾಗಿದ್ದ ಅಂಬರೀಶ್ 1991ರಲ್ಲಿ ನಟಿ ಸುಮಲತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಸಿರಿದರು. 

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ 1972ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅಂಬರೀಶ್, ಖಳನಾಯಕನ ಪಾತ್ರದಲ್ಲಿ ಚಿತ್ರರಸಿಕರ ಮನ ಗೆದ್ದಿದ್ದರು. ನಟ ವಿಷ್ಣುವರ್ಧನ್ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬರೀಶ್, ಚಿತ್ರರಂಗದಲ್ಲಿ ಕುಚ್ಚಿಕ್ಕೂ ಗೆಳೆಯರೆಂದೇ ಪ್ರಸಿದ್ಧರು. 

Products from Amazon.in

ವಿಷ್ಣು ಸಾವಿನ ಬಳಿಕ ಅಂಬರೀಶ್ ಸ್ವಲ್ಪ ಕಾಲ ಒಂಟಿಯಾಗಿದ್ದರೂ, ನಂತರ ಚಿತ್ರರಂಗದ ಜತೆಗೆ ರಾಜಕೀಯದಲ್ಲೂ ಕೈಯಾಡಿಸಿದರು. ಬೆಂಗಳೂರು ರೇಸ್‌ ಕೋರ್ಸ್‌ ಕ್ಲಬ್‌ಗೆ ನಿಯತವಾಗಿ ಭೇಟಿ ನೀಡುತ್ತಿದ್ದ ಅಂಬರೀಶ್, ಕುದುರೆ ರೇಸ್‌ ಕುರಿತು ತೀವ್ರ ಆಸಕ್ತಿ ಹೊಂದಿದ್ದರು. 

ರೆಬೆಲ್‌ ಸ್ಟಾರ್ ಬಿರುದಿನ ಜತೆಗೆ ಕಾಂಗ್ರೆಸ್ ಪಕ್ಷದ ಮೂಲಕ ಸಂಸದರಾಗಿ, ರಾಜ್ಯ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ, ಅಂತ ಇವು ಅಂಬರೀಶ್ ಅವರನ್ನು ನೆನಪಿಸುವ ಕನ್ನಡದ ಕೆಲವು ಪ್ರಸಿದ್ಧ ಚಿತ್ರಗಳು. 
ಚಿತ್ರರಂಗದಲ್ಲಿ ಹಿರಿಯರಾಗಿದ್ದ ಅಂಬರೀಶ್, ಕ್ರಿಕೆಟ್ ಕುರಿತು ಕೂಡ ಒಲವು ಹೊಂದಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. 

Products from Amazon.in

ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸಿನಿಮಾದತ್ತ ಒಲವು ಕಡಿಮೆಯಾಗಿದ್ದರೂ, ಚಿತ್ರರಂಗದ ಕಾರ್ಯಕ್ರಮಕ್ಕೆ ಅಂಬಿ ಸದಾ ಹಾಜರಾಗುತ್ತಿದ್ದರು. ಅವರ ಕುದುರೆ ರೇಸ್‌ ಹುಚ್ಚು ಹಲವು ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಅಂಬಿ ರೆಬೆಲ್‌ಸ್ಟಾರ್ ಎಂಬ ಪಟ್ಟ ಉಳಿಸಿಕೊಂಡಿದ್ದರು. ಅದರ ಜತೆಗೆ ಗಾಲ್ಫ್ ಆಟದ ಶೋಕಿಯೂ ಅಂಬಿಗೆ ಇತ್ತು. 

ಪ್ರಶಸ್ತಿ ಮತ್ತು ಮನ್ನಣೆಗಳು

  • 1982 ರಲ್ಲಿ ಅಂತ ಗಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ.
  • ಪುಟ್ಟಣ್ಣ ಕನ್ನಗಲ್ ನಿರ್ದೇಶನದ ಮಸನದ ಹೂವು ಚಿತ್ರದಲ್ಲಿ “ಅತ್ಯುತ್ತಮ ಪೋಷಕ ನಟ” (1985-86) ಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ
  • ರಾಜೇಂದ್ರ ಬಾಬು ನಿರ್ದೇಶನದ “ಒಲವೀನ ಉಡುಗೋರೆ ” ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ.
  • 2005 ರಲ್ಲಿ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪಡೆದರು.
  • ಫಿಲ್ಮ್ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ – ದಕ್ಷಿಣ 2009.
  • ಆಂಧ್ರ ಸರ್ಕಾರವು ನಂದಿ ಪ್ರಶಸ್ತಿಯನ್ನು 2009 ರಲ್ಲಿ ಗೌರವಿಸಿತು.
  • 90 ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ತಿರಸ್ಕರಿಸಿದ ನಂತರ, ತಿರುವನಂತಪುರ ಟಿ.ಎನ್.ಬಾಲಾ ಕೃಷ್ಣ ಅವರಿಗೆ ನೀಡಲಾಯಿತು
  • ಟಿವಿ 9 ಸ್ಯಾಂಡಲ್ವುಡ್ ಸ್ಟಾರ್ ಅವಾರ್ಡ್ಸ್ – 2012, ಜೀವಮಾನ ಸಾಧನೆಯ ಪ್ರಶಸ್ತಿ
  • ಕರ್ನಾಟಕ ಸರ್ಕಾರ ಡಾ. ವಿಷ್ಣುವರ್ಧನ್ ಪ್ರಶಸ್ತಿ 2011 ರಲ್ಲಿ
  • 2013 ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್[೧೨]
  • SIIMA ಜೀವಮಾನ ಸಾಧನೆ ಪ್ರಶಸ್ತಿ 2012

Products from Amazon.in

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ